ಪಂಚಾಯತ್ ರಾಜ್ 73 ನೇ ತಿದ್ದುಪಡಿ

👉
ಪಂಚಾಯಿತಿ ರಾಜ್ಯಗಳು ಅಥವಾ ಅವುಗಳ ಪರಿಕಲ್ಪನೆಗಳು ಭಾರತಕ್ಕೆ ಹೊಸದೇನಲ್ಲ . ಸಂವಿಧಾನದ 40 ನೇ ಪರಿಚ್ಛೇದದಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳು ಭಾಗದಲ್ಲಿ ಅದರ ಬಗ್ಗೆ ಮೊದಲೇ ವಿವರಣೆಯನ್ನು ನೀಡಲಾಗಿದೆ.
👉
40 ನೇ ಪರಿಚ್ಛೇದದಲ್ಲಿ ಹೀಗೆ ಹೇಳಲಾಗಿದೆ ರಾಜ್ಯವು ಗ್ರಾಮಗಳಲ್ಲಿ ಪಂಚಾಯಿತಿ ಗಳನ್ನು ರಚಿಸುವತ್ತ ಹಾಗೂ ಅವುಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವತ್ತ ಗಮನ ಹರಿಸಿ ಅವು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ನಿಯಮಗಳನ್ನು ರಚಿಸಬೇಕು .
👉
73 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಭಾಗ 9 ನ್ನು ಸೇರಿಸಲಾಯಿತು. 243 ನೇ ಪರಿಚ್ಛೇದದ ಮೂಲಕ ಪಂಚಾಯಿತಿಗೆ ಸಂಬಂಧಿಸಿದ ಶಬ್ಧಗಳಾದ ಜಿಲ್ಲೆ, ಗ್ರಾಮಸಭೆ , ಮಧ್ಯಂತರ ಹಂತ , ಪಂಚಾಯಿತಿ , ಪಂಚಾಯಿತಿ ಪ್ರದೇಶ , ಜನಸಂಖ್ಯೆ ಮುಂತಾದ ಶಬ್ದಗಳ ವಿವರಣೆಯನ್ನು ನೀಡಲಾಯಿತು.
👉
243 A ಇದು ಗ್ರಾಮ ಸಭೆಗಳ ಅಧಿಕಾರಗಳ ಬಗ್ಗೆ ವಿವರಿಸುತ್ತದೆ.
👉
243 B ಇದು ಪ್ರತಿ ರಾಜ್ಯವೂ ಪಂಚಾಯಿತಿಗಳನ್ನು ಹೊಂದಿರಲೇಬೇಕು ಎಂಬುದರ ಬಗ್ಗೆ ಹೇಳುತ್ತದೆ.
👉
243 C ಇದು ಪಂಚಾಯಿತಿ ಹೊಂದಬಹುದಾದ ಸದಸ್ಯರ ಸಂಖ್ಯೆಯ ಬಗ್ಗೆ ಹೇಳುತ್ತದೆ.
👉
243 D ಇದು ಪ್ರತಿಯೊಂದು ಪಂಚಾಯಿತಿಗಳಲ್ಲೂ ಅದು ಹೊಂದಿರಬೇಕಾದ ಪ.ಜಾತಿ , ಪ.ಪಂಗಡಗಳ ಮೀಸಲಾತಿಯ ಬಗ್ಗೆ ಹೇಳುತ್ತದೆ. ಅಲ್ಲದೇ 1/3 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ದೊರಯಬೇಕು ಎಂದು ಹೇಳುತ್ತದೆ.
👉
243 E ಪಂಚಾಯಿತಿಗಳ ಕಾಲಾವಧಿಯನ್ನು ವಿವರಿಸುತ್ತದೆ. ಅದನ್ನು 5 ವರ್ಷಗಳಿಗೆ ನಿಗದಿ ಪಡಿಸುತ್ತದೆ.
👉
243 F ಇದು ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಣೆ ನೀಡುತ್ತದೆ.
👉
243 G ಪಂಚಾಯಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ಅಧಿಕಾರಗಳು ಪ್ರತಿಯೊಂದು ಪಂಚಾಯಿತಿಯಲ್ಲೂ ರಾಜ್ಯ ಸರ್ಕರಗಳ ಮೇಲ್ವಿಚಾರಣೆಯಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೆಲಸಗಳನ್ನ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಲು ಬೇಕಾದ ಧಿಕಾರಗಳನ್ನು ಒಳಗೊಂಡಿರುತ್ತದೆ.
👉
243 H ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ವಿವರಿಸುತ್ತದೆ.
👉
243 I ಆರ್ಥಿಕ ಸ್ಥಿತಿಗಳನ್ನು ಅವಲೋಕಿಸಲು ಹಣಕಾಸು ಆಯೋಗಗಳ ರಚನೆಯನ್ನು ವಿವರಿಸುತ್ತದೆ.
👉
243 J ಲೆಕ್ಕ ಪರಿವೀಕ್ಷಣೆಯನ್ನು ವಿವರಿಸುತ್ತದೆ.
👉
243 K ಇದು ಪಂಚಾಯಿತಿಯ ಚುನಾವಣೆಯ ಬಗ್ಗೆ ಹೇಳುತ್ತದೆ. ಮತದಾರ ಪಟ್ಟಿ ತಯಾರಿಕೆಯಿಂದ ಹಿಡಿದು ಶಿಸ್ತುಬದ್ಧ ಪಂಚಾಯಿತಿ ರಚನೆಯವರೆಗಿನ ಪ್ರಕ್ರಿಯೆ ಒಳಗೊಂಡಿದೆ.
👉
243 L ರಾಜ್ಯ ಕ್ಷೇತ್ರಗಳಿಗೆ ಈ ಕಾಯ್ದೆಯು ಅನ್ವಯವಾಗುವ ಬಗ್ಗೆ ವಿವರಣೆ ನೀಡುತ್ತದೆ.
👉
243 M ಇದು ಸಂವಿಧಾನದ 244 ನೇ ಪರಿಚ್ಛೇದಗಳಲ್ಲಿ ವಿವರಿಸಿರುವ ಪ್ರಾಂತ್ಯಗಳಿಗೆ 73 ನೇ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳುತ್ತದೆ.
👉
243 N 73 ನೇ ತಿದ್ದುಪಡಿಯ ಜೊತೆಗೆ ಅದಕ್ಕೆ ಪೂರ್ವದಲ್ಲಿ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾಯ್ದೆಗಳು ಮುಂದುವರಿಯುವ ಬಗ್ಗೆ ಹೇಳುತ್ತದೆ.
👉
243 O ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 9 ಎ ಎಂಬ ಭಾಗವನ್ನು ಸೇರಿಸಲಾಯಿತು. 243 ನೇ ಪರಿಚ್ಛೇದಕ್ಕೆ ಅನುಚ್ಛೇದಗಳನ್ನು ಸೇರಿಸಲಾಯಿತು. 243 P ಯಿಂದ 243 Z G ವರೆಗೆ
👉
74 ನೇ ತಿದ್ದು ಪಡಿಯಲ್ಲಿ 243 P ಇದು ಕಮಿಟಿ , ಜಿಲ್ಲೆ ಮಹಾನಗರ ಪ್ರದೇಶ ಮುನಿಸಿಪಲ್ ಪ್ರದೇಶ , ನಗರಸಭೆ , ಪಂಚಾಯತ್ , ಜನಸಂಖ್ಯೆ ಮುಂತಾದ ಶಬ್ದಗಳಿಗೆ ವಿವರಣೆ ನೀಡುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Q ಇದು ಮುನಿಸಿಪಲಿಟಿಗಳ ರಚನೆಯ ಬಗ್ಗೆ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 R ನಗರ ಸಭೆಗಳ ರಚನೆ ಬಗ್ಗೆ ವಿವರಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 S ವಾರ್ಡ್ ಕಮಿಟಿಗಳ ರಚನೆ.
👉
74 ನೇ ತಿದ್ದು ಪಡಿಯಲ್ಲಿ 243 T ಸ್ಥಾನಗಳ ಮೀಸಲಾತಿ ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ ಮೀಸಲಾತಿ ಬಗ್ಗೆ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 U ನಗರ ಸಭೆಗಳ ಅವಧಿಯ ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.
👉
74 ನೇ ತಿದ್ದು ಪಡಿಯಲ್ಲಿ 243 V ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ ಇದ್ದಂತೆಯೇ ಇದೆ.
👉
74 ನೇ ತಿದ್ದು ಪಡಿಯಲ್ಲಿ 243 W ಅಧಿಕಾರ ಹಾಗೂ ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು.
👉
74 ನೇ ತಿದ್ದು ಪಡಿಯಲ್ಲಿ 243 X ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Y ಇದು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z ಲೆಕ್ಕ ಪತ್ರವನ್ನು ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z A ನಗರಸಭೆಯ ಚುನಾವಣೆಗಳ ಬಗ್ಗೆ ಹೇಳುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z B ರಾಜ್ಯ ಕ್ಷೇತ್ರಗಳಿಗೆ ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z C ಪಂಚಾಯಿತಿಗಳಲ್ಲಿ ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ .
👉
74 ನೇ ತಿದ್ದು ಪಡಿಯಲ್ಲಿ 243 Z D ಜಿಲ್ಲಾ ಯೋಜನಾ ಕಮಿಟಿ ಬಗ್ಗೆ ತಿಳಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z E ಮಹಾನಗರ ಪಾಲಿಕೆ ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z F ನಗರಸಭೆಯ ಹಳೆಯ ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.
👉
74 ನೇ ತಿದ್ದು ಪಡಿಯಲ್ಲಿ 243 Z G ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ ದೂರವಿಡುತ್ತದೆ.
👉
ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾನೆ.
👉
ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರವಿದೆ.
👉
ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
👉
ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ನಿಧಿಯಿಂದ ತಮ್ಮ ಸಂಬಳ ಭತ್ಯೆಗಳನ್ನು ಪಡೆಯುತ್ತಾರೆ.
👉
ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವಿರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪುಗಳನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಬಹುದು.
👉
ಕೆಲವೊಂದು ಜಿಲ್ಲೆಗಳಲ್ಲಿ 2500 ಕ್ಕಿಂತ ಕಡಿಮೆಯಿಲ್ಲದ ಪ್ರದೇಶವನ್ನು ಕೆಲವು ಜಿಲ್ಲೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ ಕೇಂದ್ರಗಳಾಗಿ ಸರ್ಕಾರವು ನಿರ್ಧರಿಸಬಹುದು .
👉
ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ 1985 ರಲ್ಲಿ ಪಂಚಾಯಿತಿ ರಾಜ್ ಕಾಯಿದೆಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಸ್ಥಾನಗಳ ಮೀಸಲಾತಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನೀಡಲಾಯಿತು.
👉
ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ( ಸದಸ್ಯರ ಸ್ಥಾನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ಸೇರಿ ) ಕನಿಷ್ಠ 1/3 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
👉
1913 ರಲ್ಲಿ ಮೈಸೂರು ಸಂಸ್ಥಾನವು ಗ್ರಾಮಗಳಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ವಿಷಯ ಕೈಗೆತ್ತಿಕೊಂಡಿತು.
👉
1957 ರಲ್ಲಿ ಬಲವಂತರಾಯ್ ಮೆಹತ್ ಸಮಿತಿ ವರದಿ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು ಪ್ರತಿಪಾದಿಸಿ ಪ್ರಖ್ಯಾತವಾಯಿತು.
👉
73 ನೇ ತಿದ್ದು ಪಡಿಯಲ್ಲಿ ಮೂರು ಹಂತದ ಪಂಚಾಯಿತಿಗಳ ರಚನೆ ಬಗ್ಗೆ ಗ್ರಾಮ , ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ .
👉
73 ನೇ ತಿದ್ದು ಪಡಿಯಲ್ಲಿ ಪಂಚಾಯಿತಿಯಲ್ಲಿ ಒಟ್ಟು ಸ್ಥಾನಗಳ 1/3 ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಮೀಸಲಿಡಬೇಕು.
👉
73 ನೇ ತಿದ್ದು ಪಡಿಯಲ್ಲಿ ಪ್ರತಿ ರಾಜ್ಯ ಸರ್ಕಾರವೂ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿ ವಿಮರ್ಶೆ ಮಾಡಿ ಅವುಗಳಿಗೆ ಸರ್ಕಾರ ನೀಡಬೇಕಾದ ಹಣದ ಬಗ್ಗೆ ನಿರ್ಧರಿಸಲು ಹಣಕಾಸು ಆಯೋಗ ಒಂದನ್ನು ಪ್ರತಿ 5 ವರ್ಷಕ್ಕೊಮ್ಮೆ ರಚಿಸಬೇಕು.
👉
ಮೂರು ಹಂತದ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗ ರಚಿಸಲು ಕಲಂ 308 ರಲ್ಲಿ ಅವಕಾಶ ಕಲ್ಪಿಸಲಾಗಿದೆ.
👉
73 ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯವನ್ನು ಜಾರಿಗೆ ತರಲಾಯಿತು.
👉
ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯನ್ನುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಿದೆ.
👉
ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷನೂ ಮತ್ತು ಉಪಾಧ್ಯಕ್ಷನು ಇರುತ್ತಾರೆ . ಅಧ್ಯಕ್ಷನಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವಿದೆ.
👉
ಪಂಚಾಯಿತಿ ಸಮಿತಿ ಆಡಳಿತವು ಚುನಾಯಿತ ಅಧ್ಯಕ್ಷ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಕಾರ್ಯನಿರ್ವಾಹಣಾಧಿಕಾರಿಯಿಂದ ನಡೆಸಲ್ಪಡುತ್ತದೆ.
👉
ಕಾರ್ಯನಿರ್ವಹಣಾಧಿಕಾರಿಯು ರಾಜ್ಯ ಸರ್ಕಾರದ ಎ ದರ್ಜೆ ಅಧಿಕಾರಿ ಅಥವಾ ಅಸಿಸ್ಟೆಂಟ್ ಕಮಿಷನರ್ ರವರಿಗೆ ಸಮನಾ ಹುದ್ದೆಯವರಾಗಿದ್ದು , ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ಪಂಚಾಯಿತಿ ಸಮಿತಿಯ ಎಲ್ಲ ಅಧಿಕಾರಗಳು ಹಾಗೂ ನೌಕರರ ಮೇಲೆ ಹತೋಟಿ ಹೊಂದಿದ್ದು ಕೆಲಸಗಳನ್ನು ನಿರ್ವಹಿಸುತ್ತಾರೆ.
👉
ಜಿಲ್ಲಾ ಪಂಚಾಯತ್ ಪ್ರತಿ ನಲ್ವತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಹಾಗೂ ಚಿಕ್ಕಮಗಳೂರು , ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಮೂವತ್ತು ಸಾವಿರ ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹದಿನೆಂಟು ಸಾವರ ಜನಸಂಖ್ಯೆಗೆ ಒಬ್ಬರಂತೆ ಆರಿಸಿ ಬರುವ ಚುನಾಯಿತ ಸದಸ್ಯರಿರುತ್ತಾರೆ.
👉
ತಾಲ್ಲೂಕ್ ಪಂಚಾಯಿತಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಸದಸ್ಯರು ಚುನಾಯಿತರಾಗಿ ಬರುವರು .
👉
ಜಿಲ್ಲಾಪಂಚಾಯತ್ ನಲ್ಲಿ ಜಿಲ್ಲೆಯ ವಿಧಾನಭಾ , ಲೋಕಸಭಾ , ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರುಗಳು ರಾಜ್ಯ ಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಜಿಲ್ಲಾ ಪಂಚಾಯಿತಿಯ ಸದಸ್ಯರುಗಳಾಗಿರುತ್ತಾರೆ.
👉
ಬಹಳ ಹಿಂದೆ “ ಪಂಚರು ” ಪಂಚಾಯಿತಿಗಳ ಮುಖ್ಯಸ್ಥರಾಗಿರುತ್ತಿದ್ದರು.
👉
ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು ಅವಕಾಶವಿತ್ತು.
👉
1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್ ಸಮಿತಿ ” ಎಂದು ಕರೆಯಲಾಯಿತು.
👉
“ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್ ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು ಸದಸ್ಯರಾಗಿದ್ದರು.
👉
ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ ತರಲಾಯಿತು.
👉
“ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ , ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ ಜಾರಿಯಾಯಿತು.
👉
1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯನ್ನು ಜಾರಿಗೆ ತಂದಿತು.
👉
1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.
👉
“ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.
👉
1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.
👉
ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು ವರದಿಯನ್ನು ಒಪ್ಪಿಸಿತು.
👉
ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .
👉
1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್ ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್ ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿತು.
👉
ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ , ಜಿಲ್ಲಾ ಪರಿಷತ್ ) .
👉
ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಹುಟ್ಟು ಹಾಕಿದವು.
👉
ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ ವ್ಯವಸ್ಥೆ ಜಾರಿಗೆ ಬಂದಿತು.
👉
ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.
👉
ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು.
👉
ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.
👉
ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
👉
73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ ( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು ಮೀಸಲಾತಿ )
👉
73 ನೇ ತಿದ್ದುಪಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮೂರು ಹಂತದ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು.
👉
73 ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷವಾಗಿ ಶೇ.33 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಶೇ.80 ಹಾಗೂ ಹಿಂದುಳಿದ ವರ್ಗಕ್ಕೆ ಶೇ.20 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.
👉
ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆಗೆ 2002 ರಲ್ಲಿ ತಿದ್ದುಪಡಿಯನ್ನು ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
👉
ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳ ಅಭಿವೃದ್ದಿ ಕುರಿತು ಚರ್ಚಿಸಿ ಸಲಹೆ ನೀಡಲು ಪೂರಕವಾಗಿ ರಾಜ್ಯ ಪಂಚಾಯಿತಿ ಕೌನ್ಸಿಲ್ ರಚನೆಗೆ ಅವಕಾಶ ಕಲ್ಪಿಸಿದೆ.
👉
ಸಂವಿಧಾನದ 73 ನೇ ತಿದ್ದುಪಡಿ ಗ್ರಾಮ ಸಭೆಗಳನ್ನು ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಕರ್ನಾಟಕವು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಳಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಹುಟ್ಟು ಹಾಕಿದೆ.
👉
6 ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸುವುದು
👉
ವರ್ಷಕ್ಕೆ ಎರಡು ಬಾರಿ ವಾರ್ಡ್ ಸಭೆ ನಡೆಸುವುದು.
👉
ವಾರ್ಡಿನ ಮತದಾರರ ಶೇ.10 ರಷ್ಟು ಅಥವಾ 20 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಾರ್ಡ್ ಸಭೆಯ ಕೋರಂ .
👉
ವಾರ್ಡ್ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು . ಪರಿಶಿಷ್ಠ ಜಾತಿ / ಪಂಗಡಗಳ ಜನರ ಹಾಜಾರಾತಿ ಪ್ರಮಾಣ ಅವರ ಒಟ್ಟು ಜನಸಂಖ್ಯೆಗೆ ಅನುಗುಣವಾಗಿರಬೇಕು .
👉
ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಆ ವಾರ್ಡಿನ ಸದಸ್ಯರೇ ವಹಿಸಬೇಕು . ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಾಮ ನಿರ್ದೇಶ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ಅಧ್ಯಕ್ಷತೆ ವಹಿಸಬೇಕು.
👉
ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು
👉
ಕನಿಷ್ಠ ಒಂದು ವಾರಕ್ಕೆ ಮುಂಚಿತವಾಗಿ ವಾರ್ಡ್ ಸಭೆಗೆ ಸಾಕಷ್ಟು ಪ್ರಚಾರ ನೀಡಬೇಕು.
👉
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಸಭೆಗಳನ್ನು ಮೊದಲು ನಡೆಸಬೇಕು . ನಂತರ ಒಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಗ್ರಾಮ ಸಭೆಯನ್ನು ನಡೆಸಬೇಕು.
👉
ಗ್ರಾಮ ಸಭೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.
👉
ಗ್ರಾಮ ಸಭೆಯ ಶೇ.10 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಗ್ರಾಮಸಭೆಯನ್ನು ಕರೆಯಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಸಭೆಗಳನ್ನು ಕರೆಯುವುದು ಕಡ್ಡಾಯವಾಗಿದೆ. ಆದರೆ ವಿಶೇಷ ಗ್ರಾಮ ಸಭೆಗಳ ನಡುವೆ ಕನಿಷ್ಟ ಮೂರು ತಿಂಗಳ ಅಂತರವಿರಬೇಕು.
👉
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಸದಸ್ಯರು ವಹಿಸಬೇಕು.
👉
ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10 ಕ್ಕೆ ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೇಯೋ ಅದು ಗ್ರಾಮ ಸಭೆಯ ಕೋರಂ .
👉
ಗ್ರಾಮ ಸಭೆಗೆ ಪ್ರತಿ ವಾರ್ಡಿನಿಂದ ಕನಿಷ್ಟ 10 ಜನರು ಗ್ರಾಮ ಸಭೆಯಲ್ಲಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಬೇಕು.
👉
ಗ್ರಾಮ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ / ಪಂಗಡ ಜನರ ಹಾಜರಾತಿ ಪ್ರಮಾಣ ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು.
👉
ಪ್ರಕರಣ 4 ರಲ್ಲಿ ಗ್ರಾಮ ಪಂಚಾಯಿತಿ ರಚನೆ ಕುರಿತು ಸ್ಪಷ್ಟಪಡಿಸಲಾಗಿದೆ